ನೀವು ಅನುವಾದಕರೇ? ಇಲ್ಲಿ ಕ್ಲಿಕ್ ಮಾಡಿ

ನಮ್ಮ ವಿಚಾರ

ನಾವು ಅಪ್ಪ್ಲಿಕೇಶನ್ಗಳನ್ನು ರಚಿಸುವ ವ್ಯವಹಾರದಲ್ಲಿ ತೊಡಗಿದ್ದೇವೆ.

ಈ ಅಪ್ಪ್ಲಿಕೇಶನ್ಗಳನ್ನು ಬಳಸಿ ಮನೋರಂಜನಾ ಸೌಕರ್ಯಗಳನ್ನು ಒದಗಿಸುವವರಿಗಾಗಿ ಉತ್ಪನ್ನಗಳನ್ನುತಯಾರಿಸುತ್ತೇವೆ.ಈ ಶತಮಾನ ತಂತ್ರಜ್ಞಾನದ ಶತಮಾನ. ನಮ್ಮ ಫೋನ್ ಗಳಮೇಲೆ ಕೈ ಅನ್ನು ಆಡಿಸುವುದರ ಮೂಲಕ ವಿಮಾನಯಾನದ ಟಿಕೆಟನ್ನು ಕೂಡ ಬುಕ್ ಮಾಡಬಹುದು. ವೃದ್ಧರೂ ಕೂಡ ಈ ಸೌಲಭ್ಯವನ್ನು ಉಚಿತರೀತಿಯಲ್ಲಿ ಬಳಸುತ್ತಿದ್ದಾರೆ. ವೈದ್ಯರೊಂದಿಗೆ ಸಮಾಲೋಚನೆ ನಿಗದಿಗೊಳಿಸಲು, ಔಷಧಿ ತೆಗೆದುಕೊಳ್ಳಲು ಸಮಯ ನಿಗದಿಗೊಳಿಸಲು, ಪ್ರೀತಿ ಪಾತ್ರರನ್ನು ಭೇಟಿ ಮಾಡಲು ಮುಂಗಡ ಟಿಕೆಟ್ ಬುಕ್ ಮಾಡಲು.

ಇಡೀ ಪ್ರಪಂಚದಲ್ಲಿ IT ಕ್ಷೇತ್ರದಲ್ಲಿ ಮುನ್ಚೂಣಿಯಲ್ಲಿದ್ದರೂ ನಾವು ನಮ್ಮ ಸ್ವಂತ ಜನಗಳ ಹಿತವನ್ನು ಅಲಕ್ಷಿಸುತ್ತಿದ್ದೇವೆ ಎಂದು ನಮ್ಮ ಗಮನಕ್ಕೆ ಬರುತ್ತಿದೆನಾವು ವಿದೇಶಿಯರ ಅಗತ್ಯಕ್ಕೆ ತಕ್ಕಂತೆ ಅಪ್ಲಿಕೇಶನ್ಗಳನ್ನು ನಿರ್ಮಿಸುತ್ತಿದ್ದೇವೆ. ಇವುಗಳು ಅಲ್ಲಿನ ಜನರ ಬಳಕೆಗೆ ತಕ್ಕಂತೆ ಇರುತ್ತವೆ ಮುಖ್ಯ ವಿಷಯವೆಂದರೆ ಇವುಗಳು ಅವರದೇ (ವಿದೇಶಿ) ಭಾಷೆಯಲ್ಲಿರುತ್ತವೆ.

ಇದರಿಂದ ನಮಗೆ ತಿಳಿಯುವುದೇನೆನ್ದರೆ, ನಮಗೆ ವಿದೇಶಿ ಭಾಷೆಗಳಲ್ಲಿ ಜ್ಞಾನ ವಿಲ್ಲದ ಕಾರಣ (ಸಾಮಾನ್ಯವಾಗಿ ಇಂಗ್ಲೀಷ್) ಭಾರತೀಯರಿಗೆ ತಂತ್ರಜ್ಞಾನದ ಅದ್ಭುತ ಪ್ರಯೋಜನಗಳು ಮತ್ತು ವಿನೂತನವಾದ ಮೊಬೈಲ್ ಕ್ರಾನ್ತಿಯ ಬಗ್ಗೆ ಅರಿವಿಲ್ಲದನ್ತಾಗಿದೆ.

ಭಾಷೆಯಲ್ಲಿ ಉತ್ತಮ ಹಿಡಿತ ವಿಲ್ಲದ ಕಾರಣ ಜನರು ಮೊಬೈಲ್ ಬಳಸಿ ಬ್ಯಾಂಕ್ ವ್ಯವಹಾರಗಳು ಬುಕಿಂಗ್ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಹಿಂಜರಿಯುತ್ತಾರೆ

ಕೇವಲ ಭಾಷಾ ಜ್ಞಾನದ ಕೊರತೆಯಿಂದ, ದೇಶದ ಸಾಮಾನ್ಯ ಬಳಕೆದಾರರ (ವೃದ್ಧರ) ಮತ್ತು ಸೌಲಭ್ಯ ವಿತರಕರ ಮಧ್ಯೆ ಸಮ್ಪರ್ಕವಿಲ್ಲದನ್ತಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ

ನಾವು ಭಾರತೀಯ ಭಾಷೆಗಳ ಹಾಗೂ ಭಾರತೀಯ ಜನಗಳ ಮೇಲೆ ಮಾತ್ರ ಗಮನ ಹರಿಸುತ್ತೇವೆ.

ನಮ್ಮನ್ನು ಏಕೆ “ದೇವನಾಗರಿ” ಎಂದು ಕರೆಯಲಾಗುತ್ತದೆ ?

ದೇವನಾಗರಿ – ಈ ಪದವು ಭಾರತೀಯರ ಹೃದಯ ಮತ್ತು ಮನಸ್ಸನ್ನು ಪ್ರತಿಧ್ವನಿಸುತ್ತದೆ. ನಮ್ಮ ಹೆಚ್ಚಿನ ಭಾಷೆಗಳು ಈ ಪ್ರಾಚೀನ ಲಿಪಿಯಿಂದ ಹೊರಹೊಮ್ಮಿವೆ ಮತ್ತು ನಾವು ನಗುವನ್ನು ನೋಡಲು ಬಯಸುತ್ತೇವೆ ಮತ್ತು ನಮ್ಮ ಸ್ನೇಹಿತರು, ಕುಟುಂಬ ಮತ್ತು ದೇಶೀಯರನ್ನು ದೇವನಾಗರಿ ಮೂಲಕ ಸಕ್ರಿಯಗೊಳಿಸಲು ಬಯಸುತ್ತೇವೆ.